ಸದ್ಯದಲ್ಲಿಯೇ ರಾಜ್ಯ ಸರಕಾರದ ಎಂಎಲ್ಸಿ ಹಾಗೂ ಸಚಿವರ ಬಣ್ಣ ಬಯಲಾಗಲಿದೆ. ನಾನು ಭವಿಷ್ಯ ನುಡಿಯುತ್ತಿಲ್ಲ. ಬದಲಿಗೆ ಇನ್ನೆರೆಡು ದಿನ ಕಾದು ನೋಡಿ. ಇದೆಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯರ ಬುಡಕ್ಕೆ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಬಿಜೆಪಿ ಸೇರುವುದು ಖಚಿತ. ನಂಜನಗೂಡ ಉಪಚುನಾವಣೆಯಲ್ಲಿ ಬಿಜೆಪಿ ಜಯಭೇರಿಯಾಗುವುದು ಶತಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸುನಿಲ್