ಬೆಂಗಳೂರು: ಲಂಗು ಲಗಾಮಿಲ್ಲದೆ ಬೇಕಾ ಬಿಟ್ಟಿ ಬಿಲ್ ನೀಡಿ ರೋಗಿಗಳನ್ನು ಸುಲಿಗೆ ಮಾಡುವ ಖಾಸಗಿ ಆಸ್ಪತ್ರೆಗಳು ಇನ್ನು ಎಚ್ಚೆತ್ತುಕೊಳ್ಳುವುದು ಒಳ್ಳೆಯದು. ಈ ರೀತಿ ಬೇಕಾಬಿಟ್ಟಿ ಶುಲ್ಕ ವಿಧಿಸಿ ರೋಗಿಗಳನ್ನು ದೈನೇಸಿ ಅವಸ್ಥೆಗೆ ತರುವ ಆಸ್ಪತ್ರೆಗಳಿಗೆ ಕಡಿವಾಣ ಹಾಕಲು ರಾಜ್ಯ ಆರೋಗ್ಯ ಸಚಿವ ರಮೇಶ್ ಕುಮಾರ್ ತೀರ್ಮಾನಿಸಿದ್ದಾರೆ. ದುಬಾರಿ ವೆಚ್ಚ, ಅನಗತ್ಯ ಶುಲ್ಕ ವಿಧಿಸುವ ಆಸ್ಪತ್ರೆಗಳಿಗೆ ಲಗಾಮು ಹಾಕುವುದಾಗಿ ಹೇಳಿದ್ದಾರೆ.ಸದನದ ಆರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಬಗ್ಗೆ