ಖದೀಮನೊಬ್ಬ ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಆ ಕೆಲಸ ಮಾಡುತ್ತಿರೋದಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ಮನೆಯಲ್ಲಿ ಒಂಟಿಯಾಗಿ ಇರೋ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಆರೋಪಿ ರಂಗನಾಥ್, ಮಹಿಳೆಯರ ಮೇಲೆ ಮುಗಿಬಿದ್ದು ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದನು. ಮೈಸೂರಿನಲ್ಲಿ ಹೊಸಕೇರಿಯಲ್ಲಿ ಒಂಟಿ ಮಹಿಳೆ ಇರೋ ಮನೆಗೆ ನುಗ್ಗಿದ್ದಾಗ ಆ ಮಹಿಳೆ ಕಿರುಚಾಟ ನಡೆಸಿದ್ದಾರೆ. ಇದರಿಂದ ಸುತ್ತಲಿನ ಜನರು ಬಂದು ಸರಗಳ್ಳ ಆರೋಪಿ ರಂಗನಾಥ್ ನಿಗೆ ಸಖತ್ ಗೂಸಾ ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ.