ಯುವಕನೊಬ್ಬ ಮಾಡಬಾರದ ಕೆಲಸ ಮಾಡಿ ಧರ್ಮದೇಟು ತಿಂದಿರೋ ಘಟನೆ ನಡೆದಿದೆ. ತಲೆಕೆಳಗೆ ಮಾಡಿ ಯುವಕನನ್ನು ಕಟ್ಟಿ ಹಾಕಿ ಮನಬಂದಂತೆ ಜನರು ಥಳಿಸಿದ್ದಾರೆ. ಉತ್ತರಾಖಂಡದ ಹರಿದ್ವಾರದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಯುವಕನು ಮೊಬೈಲ್ ಕದ್ದಿದ್ದಾನೆ ಎಂದು ಶಂಕೆಯಿಂದ ಜನರು ರೊಚ್ಚಿಗೆದ್ದು ಆತನಿಗೆ ಹೊಡೆದಿದ್ದಾರೆ. ಮರಕ್ಕೆ ಯುವಕನನ್ನು ತಲೆಕೆಳಗಾಗಿ ಕಟ್ಟಿರೋ ಜನರು ಗಂಭೀರವಾಗಿ ಗಾಯಗೊಳ್ಳುವಂತೆ ಹಲ್ಲೆ ಮಾಡಿದ್ದಾರೆ.