ಗಾನ ಗಂಧರ್ವ ಡಾ. ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ಕೃಷಿ ಸಚಿವ ಬಿ. ಸಿ. ಪಾಟೀಲ ಸಂತಾಪ ಸೂಚಿಸಿದ್ದಾರೆ. ಟ್ವಿಟ್ ಮಾಡಿರುವ ಸಚಿವ ಬಿ.ಸಿ.ಪಾಟೀಲ್, ಭಾರತೀಯ ಚಿತ್ರರಂಗದ ಅದೆಷ್ಟೋ ನಟರ ಅಭಿನಯದಲ್ಲಿ ತಮ್ಮ ಧ್ವನಿಯ ಮೂಲಕ ಬೆರೆತಿದ್ದ ಅಪರೂಪದ ಕಲಾವಿದ, ಗಾನ ಗಂಧರ್ವ ಶ್ರೀ ಡಾ. ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ನಿಧನರಾಗಿರುವ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ.ಅವರ ಸಾಧನೆಗಳು ಅಪೂರ್ವ ಮತ್ತು ಅವರ್ಣನೀಯ. ದೇಶ ಕಂಡ ಶ್ರೇಷ್ಠ