ಬೆಂಗಳೂರು: ರಾಜ್ಯ ವಿಧಾನಸಭೆ ಕಲಾಪ ಆರಂಭವಾಗಿ ಎರಡು ದಿನಗಳ ಕಳೆದರೂ ಶಾಸಕರು, ಸಚಿವರ ಗೈರು ಹಾಜರಾತಿ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಕೆಂಗಣ್ಣಿಗೆ ಕಾರಣವಾಗಿದೆ.ತಡವಾಗಿ ಸದನಕ್ಕೆ ಬಂದ ಸಚಿವ ಡಿಕೆ ಶಿವಕುಮಾರ್, ಜಮೀರ್ ಅಹಮ್ಮದ್ ಗೆ ಸ್ಪೀಕರ್ ರಮೇಶ್ ಕುಮಾರ್ ಕ್ಲಾಸ್ ತೆಗೆದುಕೊಂಡ ಘಟನೆ ನಿನ್ನೆಯ ಕಲಾಪದಲ್ಲಿ ನಡೆದಿದೆ.ಶಾಸಕರು, ಸಚಿವರುಗಳು ಬಹುಪಾಲು ಗೈರು ಹಾಜರಾಗಿರುವುದನ್ನು ನೋಡಿ ಕೆಂಡಾಮಂಡಲರಾದ ಸ್ಪೀಕರ್, 15 ನಿಮಿಷದೊಳಗೆ ಸದನಕ್ಕೆ ಹಾಜರಾಗುವಂತೆ ನೋಡಿಕೊಳ್ಳಲು ಆದೇಶ ನೀಡಿದಾಗ ಸಿಎಂ, ಡಿಸಿಎಂ