ಶಿವಮೊಗ್ಗ : ಸಿಎಎ ಬಗ್ಗೆ ಮಾತನಾಡಬಾರದು ಎಂದು ವ್ಯಕ್ತಿಯೊಬ್ಬ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಜೀವ ಬೆದರಿಕೆ ಹಾಕಿದ್ದಾನೆ ಎಂಬುದಾಗಿ ತಿಳಿದುಬಂದಿದೆ.ಶುಕ್ರವಾರದಂದು ಅಪರಿಚಿತ ವ್ಯಕ್ತಿಯೊಬ್ಬ ಈಶ್ವರಪ್ಪ ಅವರಿಗೆ ಕರೆ ಮಾಡಿ, ಸಂವಿಧಾನದ ವಿಧಿ 370, ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಮತ್ತು ಮುಸ್ಲಿಂ ವಿರುದ್ಧ ಮಾತನಾಡಿದರೆ ಸರಿ ಇರುವುದಿಲ್ಲ ಎಂದು ತಮಿಳು ಭಾಷೆಯಲ್ಲಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಸಚಿವರು ಶಿವಮೊಗ್ಗ ಎಸ್ ಪಿಗೆ ದೂರು ನೀಡಿದ್ದು, ಈ