ಜಿಲ್ಲೆಯಾದ್ಯಂತ ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಕುಷ್ಠರೋಗ ಪತ್ತೆಗೆ ವಿಶೇಷ ಆಂದೋಲನವನ್ನು ಅಕ್ಟೋಬರ್ 22 ರಿಂದ ನವೆಂಬರ್ 4ರವರೆಗೆ ನಡೆಸುವಂತೆ ಜಿಲ್ಲಾಧಿಕಾರಿಯು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಕಲಬುರಗಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ರಾಷ್ಟ್ರೀಯ ಕುಷ್ಠರೋಗ ನಿಯಂತ್ರಣಾ ಕಾರ್ಯಕ್ರಮದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಡಿಸಿ ಆರ್. ವೆಂಕಟೇಶಕುಮಾರ ಮಾತನಾಡಿದರು. ಈ ವಿಶೇಷ ಆಂದೋಲನದಲ್ಲಿ ಜಿಲ್ಲೆಯ ಒಟ್ಟು 542606 ಮನೆಗಳಿಗೆ ಕುಷ್ಠರೋಗ ಪತ್ತೆ ಹಚ್ಚಲು ತಲಾ ಓರ್ವ ಮಹಿಳಾ ಮತ್ತು