Widgets Magazine

ಕೊರೊನಾ ವೈರಸ್ ಗೆ ಜಾತಿ ಬಣ್ಣ ಹಚ್ಚೋದ್ಯಾಕೆ? ಎಂದ ಸಿದ್ದರಾಮಯ್ಯ

ಬೆಂಗಳೂರು| Jagadeesh| Last Modified ಬುಧವಾರ, 1 ಏಪ್ರಿಲ್ 2020 (14:19 IST)
ಕೊರನಾ ವೈರಸ್ ಯಾವುದೇ ಜಾತಿ, ಧರ್ಮ ಇಲ್ಲದೇ ಜನರಿಗೆ ತಗಲುತ್ತದೆ ಎಂದು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮ್ಯ ಹೇಳಿದ್ದು, ಇದಕ್ಕೆ ಧರ್ಮದ ಬಣ್ಣ ಹಚ್ಚಬೇಡಿ ಎಂದು ಗರಂ ಆಗಿದ್ದಾರೆ.

ಕೊರೊನಾ ವೈರಸ್ ಹರಡುತ್ತಿರುವ ಅಪಾಯಕಾರಿ ಸನ್ನಿವೇಶದಲ್ಲಿ ಜಾತಿ, ಧರ್ಮದ ಬಣ್ಣ ಹಚ್ಚುವ ಯತ್ನ ನಡೆಯುತ್ತಿರೋದು ಸರಿಯಲ್ಲ ಅಂತ ತಿಳಿಸಿದ್ದಾರೆ.

ಇನ್ನು ಕೊರೊನಾ ವಿರುದ್ಧ ಸಮರ್ಪಕವಾಗಿ ಹೋರಾಟ ನಡೆಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿಫಲವಾಗಿವೆ ಎಂದು ದೂರಿದ್ದಾರೆ.

ಕಾಂಗ್ರೆಸ್ ನ ಶಾಸಕರು ಹಾಗೂ ಸಂಸದರು ಕೋವಿಡ್ – 19 ವಿರುದ್ಧದ ಹೋರಾಟಕ್ಕೆ ತಲಾ ಒಂದು ಲಕ್ಷ ರೂ.ಗಳ ಪರಿಹಾರ ಧನ ನೀಡುವಂತೆ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :