ಅತ್ಯಾಚಾರದ ಆರೋಪದ ಮೇಲೆ ಶ್ರೀಲಂಕಾ ಬ್ಯಾಟರ್ ಧನುಷ್ಕ ಗುಣತಿಲಕ ಅವರನ್ನು ಸಿಡ್ನಿ ಪೊಲೀಸರು ಇಂದು ಬೆಳಿಗ್ಗೆ ಬಂಧಿಸಿದ್ದಾರೆ. ಸಿಡ್ನಿಯ 29 ವರ್ಷದ ಮಹಿಳೆ ಗುಣತಿಲಕ ಅವರ ಮೇಲೆ ಅತ್ಯಾಚಾರದ ದೂರು ನೀಡಿದ್ದಾರೆ. ರೋಸ್ಬೇಯಲ್ಲಿ ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿದ್ದು, ಗುಣತಿಲಕ ಆನ್ಲೈನ್ ಡೇಟಿಂಗ್ ಆ್ಯಪ್ ಮೂಲಕ ಮಹಿಳೆಯೊಬ್ಬರ ಸಂಪರ್ಕ ಮಾಡಿದ್ದರು. ಬಳಿಕ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 2015 ರಿಂದ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿರುವ