ಕಲಬುರಗಿ : ರಾಜ್ಯದಲ್ಲಿ ಸ್ವಲ್ಪ ದಿನ ಬಿಡುವು ನೀಡಿದ್ದ ಆಜಾನ್ ಯುದ್ಧ ಮತ್ತೆ ಸದ್ದು ಮಾಡ್ತಿದೆ.ಮಸೀದಿಗಳು ಧ್ವನಿ ವರ್ಧಕಗಳ ನಿಯಮ ಉಲ್ಲಂಘನೆ ಮಾಡುತ್ತಿದ್ದರೂ ಅವುಗಳ ವಿರುದ್ಧ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಆಜಾನ್ ವಿರುದ್ಧ ಹಿಂದೂ ಸಂಘಟನೆಗಳು ಹೋರಾಟಕ್ಕೆ ನಿರ್ಧರಿಸಿವೆ.ಮಸೀದಿ ಧ್ವನಿವರ್ಧಕ ವಿರುದ್ಧ ಆಗಸ್ಟ್ 23ರಂದು, ರಾಜ್ಯಾದ್ಯಂತ ಶ್ರೀರಾಮಸೇನೆ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ. ಎಲ್ಲಾ ಜಿಲ್ಲೆಯ ಎಸ್ಪಿ ಕಚೇರಿಗಳ ಎದುರು ಪ್ರತಿಭಟನೆ ಮಾಡೋದಾಗಿ ಶ್ರೀರಾಮಸೇನೆ ಕರೆ ನೀಡಿದೆ. ಈ ಕುರಿತು ಮಾತನಾಡಿರುವ