ಪುಲ್ವಾಮಾ ದಾಳಿಯ ಬಗ್ಗೆ ನಿಮ್ಮಣ್ಣ ರೇವಣ್ಣ ಭವಿಷ್ಯ ಹೇಳಿದ್ದರಾ?-ಸಿಎಂ ಗೆ ಶ್ರೀನಿವಾಸಪೂಜಾರಿ ವ್ಯಂಗ್ಯ

ಉಡುಪಿ, ಶನಿವಾರ, 6 ಏಪ್ರಿಲ್ 2019 (10:23 IST)

ಉಡುಪಿ : ಪುಲ್ವಾಮಾ ದಾಳಿಯ ಬಗ್ಗೆ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಬಿಜೆಪಿ ನಾಯಕ ಶ್ರೀನಿವಾಸಪೂಜಾರಿ ಅವರು ವ್ಯಂಗ್ಯವಾಡುವುದರ ಮೂಲಕ ತಿರುಗೇಟು ನೀಡಿದ್ದಾರೆ.


ಭಾರತ, ಪಾಕ್ ನಡುವಿನ ಸಂಘರ್ಷದ ಬಗ್ಗೆ 2 ವರ್ಷದ ಹಿಂದೆಯೇ ತಿಳಿದಿತ್ತು ಎಂದು ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀನಿವಾಸಪೂಜಾರಿ, ಸಿಎಂ ಕುಮಾರಸ್ವಾಮಿ ಅವರು ನೀಚ ಚಟುವಟಿಕೆ ಮಾಡುತ್ತಿದ್ದಾರೆ. ನಿಮ್ಮಣ್ಣ ಪಾಕ್ ಸಂಘರ್ಷದ ಬಗ್ಗೆ ಭವಿಷ್ಯ ಹೇಳಿದ್ದರಾ? ಎಡಗೈಯಲ್ಲಿ ನಾಲ್ಕು, ಬಲಗೈಯಲ್ಲಿ ನಾಲ್ಕು ನಿಂಬೆ ಹಣ್ಣು ಹಿಡಿದುಕೊಂಡು ಭವಿಷ್ಯ ಹೇಳಿರಬಹುದು ಎಂದು ವ್ಯಂಗ್ಯವಾಡಿದ್ದಾರೆ.


ಪುಲ್ವಾಮಾ ಘಟನೆ ಬಗ್ಗೆ ಮೊದಲೇ ಗೊತ್ತಿದ್ದರೆ ಸಿಎಂ ಎರಡು ವರ್ಷದ ಹಿಂದೇನೆ ಹೇಳಬೇಕಿತ್ತು. ಈಗ ಚುನಾವಣೆ ಸಂದರ್ಭದಲ್ಲಿ ಹೇಳುವ ಅಗತ್ಯ ಏನಿತ್ತು? ಎಂದು ಕಿಡಿಕಾರಿದ್ದಾರೆ.


ರಾಜ್ಯದಲ್ಲಿ ಮೈತ್ರಿಯೆಂಬ ತೇಪೆಯೊಳಗೆ ಎಲ್ಲಾ ಒಡೆದಿದೆ. ಮಂಡ್ಯದಲ್ಲಿ ತಮ್ಮ ಮಗ ಗೆಲ್ಲುವುದಿಲ್ಲ ಎಂದು ಸಿಎಂ ಕುಮಾರಸ್ವಾಮಿಗೆ ಗೊತ್ತಾಗಿದೆ. ತುಮಕೂರು,ಹಾಸನ ಗೆಲುವು ಕೂಡ ಕಷ್ಟವಿದೆ ಎಂದು ಅವರಿಗೆ ಅವರಿವಾಗಿದೆ ಎಂದು ಅವರು ಲೇವಡಿ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಜೆಪಿಗೆ ಬಿಗ್ ಶಾಕ್ ಕೊಟ್ಟ ಸುಮಲತಾ ಅಂಬರೀಶ್

ಮಂಡ್ಯ : ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುಮಲತಾ ಅವರಿಗೆ ...

news

ಸ್ಮೃತಿ ಇರಾನಿ ಅಮಿತಾಭ್ ಬಚ್ಚನ್ ಆಗಲು ಹೊರಡ್ತಾರೆ, ಕೊನೆಗೆ ಆಗೋದು ವಿಲನ್!

ನವದೆಹಲಿ: ರಾಹುಲ್ ಗಾಂಧಿ ವಿರುದ್ಧ ಅಮೇಠಿಯಲ್ಲಿ ಬಿಜೆಪಿಯಿಂದ ಕಣಕ್ಕಿಳಿಯುತ್ತಿರುವ ಕೇಂದ್ರ ಸಚಿವೆ ಸ್ಮೃತಿ ...

news

ನಿಮ್ಮ ಆತ್ಮಕತೆ ಸಿನಿಮಾವಾದರೆ ನಾಯಕಿ ಯಾರಾಗಬೇಕು? ಈ ಪ್ರಶ್ನೆಗೆ ರಾಹುಲ್ ಗಾಂಧಿ ಉತ್ತರವೇನು ನೋಡಿ!

ನವದೆಹಲಿ: ಒಂದು ವೇಳೆ ನಿಮ್ಮ ಆತ್ಮಕತೆ ಸಿನಿಮಾವಾಗಿ ಹೊರಬಂದರೆ ಅದರಲ್ಲಿ ನಾಯಕಿ ಯಾರಾಗಬಹುದು? ಹೀಗಂತ ...

news

ಶಿಶ್ನದಲ್ಲಿ ಬಿಳಿ ಮಚ್ಚೆ ಕಾಣಿಸಿಕೊಂಡರೆ ಅದು ಲೈಂಗಿಕ ಜೀವನಕ್ಕೆ ಮಾರಕವಾಗಬಹುದೇ?

ಬೆಂಗಳೂರು : ಪ್ರಶ್ನೆ: ನನಗೆ 24 ವರ್ಷ. ಕಳೆದ 12 ತಿಂಗಳಲ್ಲಿ ನನ್ನ ಶಿಶ್ನದಲ್ಲಿ ಬಿಳಿ ಮಚ್ಚೆ ...