ಬೆಂಗಳೂರು : ಆರೋಗ್ಯ ಇಲಾಖೆ ಉಪಕರಣ ಖರೀದಿಯಲ್ಲಿ ಅಕ್ರಮ ಆರೋಪ ಸಿದ್ದರಾಮಯ್ಯ ನ ಆರೋಪಕ್ಕೆ ಆರೋಗ್ಯ ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವ ಬಿ.ಶ್ರೀರಾಮುಲು , ಸಿದ್ದರಾಮಯ್ಯನವರೇ, ನಾಡು ಸಂಕಷ್ಟದಲ್ಲಿದೆ. ಜನರು ಸಮಸ್ಯೆಯಲ್ಲಿದ್ದಾರೆ, ಕೊರೊನಾ ಗೆಲ್ಲಬೇಕಿದೆ. ಇದು ಕೆಲಸ ಮಾಡೋ ಸಮಯ, ಕೆಲಸ ಮಾಡಲು ಬಿಡಿ. ನಿಮ್ಮಿಂದ ಇಷ್ಟು ಕನಿಷ್ಠ ಮಟ್ಟದ ಸಹಕಾರವನ್ನು ಕೇಳುತ್ತೇನೆ. ಜನತೆಯ ಪರವಾಗಿ ನಾನು ಸಹಕಾರವನ್ನು ಕೇಳುತ್ತಿದ್ದೇನೆ