ಶೈಕ್ಷಣಿಕ ಜಿಲ್ಲೆಯಲ್ಲಿ ಇಂದು ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆ ಸಾಕಷ್ಟು ಎಡವಟ್ಟುಗಳಿಗೆ ಸಾಕ್ಷಿಯಾಯಿತು. ಪರೀಕ್ಷೆ ಆರಂಭವಾಗುತ್ತಿದ್ದಂತೆ ಶಾಲಾ ಮುಖ್ಯಸ್ಥರ ಎಡವಟ್ಟಿನಿಂದ 1೦೦ ಕ್ಕೂ ಹೆಚ್ಚು ಅಥಣಿ ತಾಲೂಕಿನ ವಿದ್ಯಾರ್ಥಿಗಳು ಶಾಲಾ ಹಾಜರಾತಿಯ ಕೊರತೆಯಿಂದ ಪರೀಕ್ಷೆಯಿಂದ ಹೊರಕ್ಕೆ ಉಳಿದ ಘಟನೆ ಜರುಗಿತು. ನಂತರ ಅಥಣಿ ತಾಲೂಕಿನ ಶೆಗುಣಸಿ ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಯನ್ನು ಪ್ರಶ್ನೆ ಪತ್ರಿಕೆ ವಾಹನದಲ್ಲಿ ಶಿಕ್ಷಕ ರೊಬ್ಬರು ಕರೆತಂದರು. ಪ್ರಶ್ನೆ ಪತ್ರಿಕೆ ವಾಹನದಲ್ಲಿ ಸಿಬ್ಬಂದಿ ಹೊರತು ಪಡಿಸಿ