ಎಸ್‌ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟ

ಬೆಂಗಳೂರು| Jaya| Last Updated: ಸೋಮವಾರ, 12 ಮೇ 2014 (11:49 IST)
ಕಳೆದ ಮಾರ್ಚನಲ್ಲಿ ನಡೆದ ಎಸ್‌ಎಸ್ಎಲ್‌ಸಿ ಪರೀಕ್ಷಾ ಪ್ರಕಟವಾಗಿದ್ದು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಬೆಂಗಳೂರಿನ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ರಿಸಲ್ಟ್‌ನ್ನು ಘೋಷಿಸಿದರು. 
 
ಪ್ರಸಕ್ತ ವರ್ಷ ಪ್ರತಿಶತ 81.19ರಷ್ಟು ಫಲಿತಾಂಶ ದಾಖಲಾಗಿದ್ದು, ಚಿಕ್ಕೋಡಿ (91.7) ಮೊದಲ ಸ್ಥಾನ, ಶಿರಸಿ ಎರಡನೇ, ಬೆಳಗಾವಿ ಮೂರನೇ ,ಮಂಡ್ಯ ನಾಲ್ಕನೇ ಸ್ಥಾನ ಪಡೆದರೆ ಬೀದರ್‌ಗೆ(75.35) ಕೊನೆ ಸ್ಥಾನ ಲಭಿಸಿದೆ. 

622 ಅಂಕಗಳನ್ನು ಪಡೆದ ವಿದ್ಯಾರ್ಥಿನಿ ಪ್ರಥಮ ಸ್ಥಾನ ಗಳಿಸಿದ್ದು, ಎಂದಿನಂತೆ ಫಲಿತಾಂಶದಲ್ಲಿ ಬಾಲಕಿಯರೇ ಮೈಲುಗೈ ಸಾಧಿಸಿದ್ದಾರೆ.
 
ಕರ್ನಾಟಕ ಬೋರ್ಡ್ ಆಫ್ ಸೆಂಕಡರಿ ಎಜುಕೇಶನ್ ಕಳೆದ ಮಾರ್ಚ್  28, ರಿಂದ 9 ಎಪ್ರೀಲ್  2014ರವರೆಗೆ  ಪರೀಕ್ಷೆಗಳನ್ನು ಆಯೋಜಿಸಿತ್ತು.
 
17 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ದಾಖಲಾಗಿದ್ದು, ಉನ್ನತ ಶ್ರೇಣಿಯಲ್ಲಿ ಪಾಸಾದವರ ಸಂಖ್ಯೆಯಲ್ಲಿ ಈ ಬಾರಿ ಹೆಚ್ಚಳವಾಗಿದೆ.ಹೊಸ ವಿದ್ಯಾರ್ಥಿಗಳು 85.37% ಫಲಿತಾಂಶವನ್ನು ದಾಖಲಿಸಿದರೆ, ಪುನರಾವರ್ತಿತ ವಿದ್ಯಾರ್ಥಿಗಳಲ್ಲಿ 45.8% ರಷ್ಟು ವಿದ್ಯಾರ್ಥಿಗಳು ಸಫಲತೆ ಸಾಧಿಸಿದ್ದಾರೆ. 
 
ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಮೇ 28 ಕೊನೆಯ ದಿನವಾಗಿದ್ದು, ಉತ್ತರಪತ್ರಿಕೆ ಪಡೆಯಲು ಮತ್ತು ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ ಮೇ 22. ಪೂರಕ ಪರೀಕ್ಷೆ  ಜೂನ್ 16 ರಂದು ನಡೆಯಲಿದೆ.  ಇದರಲ್ಲಿ ಇನ್ನಷ್ಟು ಓದಿ :