ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಮೇಡಿಮಲ್ಲಸಂದ್ರ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಇಸ್ಮಾಯಿಲ್ ಖಾನ್ ಎಂಬಾತನನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಸಯ್ಯದ್ ಹಿದಾಯತ್ ಶಾ, ಸಯ್ಯದ್ ಅಜೀಂ ಶಾ, ಸಯ್ಯದ್ ಅಖಿಲ್ ಶಾ ಎಂಬುವರೆ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಕಳೆದ ಹಲವು ದಿನಗಳಿಂದ ದಾಯಾದಿಗಳ ಮಧ್ಯೆ ಆಸ್ತಿ ವಿಚಾರಕ್ಕೆ ಕಲಹ ನಡೆಯುತ್ತಿದ್ದು, ಈ ನಡುವೆ ಮನೆ ಮುಂದೆ ಕಳೆದ ರಾತ್ರಿ ಕಾರು ನಿಲ್ಲಿಸುವ ವಿಚಾರಕ್ಕೆ ಕಿರಿಕ್ ಆಗಿದೆ.