ನೀವು ಮೀನು ತಿನ್ನುವ ಪ್ರಿಯರಾಗಿದ್ದರೆ ಈ ಸುದ್ದಿಯನ್ನು ಮಿಸ್ ಮಾಡದೇ ಓದಿ. ಮೀನಿನ ಉತ್ಪಾದನೆ ದ್ವಿಗುಣ ಗೊಳಿಸುವುದರೊಂದಿಗೆ ಕಟ್ಟ ಕಡೆಯ ಮೀನುಗಾರರಿಗೆ ಸರಕಾರದ ಆರ್ಥಿಕ ಸೌಲಭ್ಯಗಳು ಲಭ್ಯವಾಗುವಂತೆ ಮಾಡಲು ಮೀನುಗಾರಿಕಾ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಹೊಸ ಯೋಜನೆಯನ್ನು ರೂಪಿಸಲಾಗುವುದು. ಹೀಗಂತ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.ಸರಕಾರದ ಆದಾಯ ಹೆಚ್ಚಿಸಲು ರಾಜ್ಯದ ಕೆರೆ ಹಾಗೂ ಸರೋವರಗಳ ಪಾರದರ್ಶಕ ಟೆಂಡರ್ ಅಥವಾ ಗುತ್ತಿಗೆ ನೀಡಲು ಕ್ರಮವಹಿಸಿ ಸರಕಾರದ ಆದಾಯ ಹೆಚ್ಚಿಸುವುದರ ಜೊತೆಗೆ