ಕೋವಿಡ್-19 ಸೋಂಕು ಕುರಿತು ರ್ಯಾಂಡಮ್ ಮಾದರಿ ಪರೀಕ್ಷೆಯನ್ನು ತ್ವರಿತವಾಗಿ ಮುಗಿಸಿ, ಇದೇ 31ರ ನಂತರ ವ್ಯಾಪಾರ-ವಹಿವಾಟಿಗೆ ಪೂರಕ ವಾತಾವರಣ ಕಲ್ಪಿಸಲಾಗುವುದು. ಹೀಗಂತ ಕಲಬುರಗಿ ಜಿಲ್ಲಾಧಿಕಾರಿ ಶರತ್. ಬಿ ಹೇಳಿದ್ದಾರೆ.ಕಲಬುರಗಿ ಜಿಲ್ಲೆಯಲ್ಲಿ ಅಂಗಡಿ-ಮುಂಗಟ್ಟು ತೆರೆಯುವ ಸಂಬಂಧ ಚರ್ಚಿಸಲು ಕರೆದಿದ್ದ ಎಫ್ಕೆಸಿಸಿಐ ಮತ್ತು ವಿವಿಧ ವರ್ತಕರ ಸಭೆಯಲ್ಲಿ ಮಾತನಾಡಿದರು.ಎಫ್ಕೆಸಿಸಿಐ ಅಧ್ಯಕ್ಷ ಅಮರ್ನಾಥ್ ಪಾಟೀಲ್, ವರ್ತಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಸಭೆಯ ಗಮನ ಸೆಳೆದರು. 30 ಸಾವಿರಕ್ಕೂ ಹೆಚ್ಚು ನೌಕರರು ಈ ವಲಯದಲ್ಲಿದ್ದು,