Widgets Magazine

ಇಬ್ರಾಹಿಂ ಹೇಳಿಕೆಗೆ ತಿರುಗೇಟು ಕೊಟ್ಟ ಅಶ್ವತ್ಥ್ ನಾರಾಯಣ

ಕಲಬುರಗಿ| pavithra| Last Updated: ಸೋಮವಾರ, 24 ಫೆಬ್ರವರಿ 2020 (11:09 IST)
ಕಲಬುರಗಿ : ಬಿಜೆಪಿಯ 32 ಶಾಸಕರು ರಾಜೀನಾಮೆ ನೀಡುತ್ತಾರೆ ಎಂಬ ಸಿಎಂ ಇಬ್ರಾಹಿಂ ಹೇಳಿಕೆಗೆ ಡಿಸಿಎಂ ತಿರುಗೇಟು ನೀಡಿದ್ದಾರೆ.


ಈ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ ನ 32 ಶಾಸಕರು ರಾಜೀನಾಮೆ ನೀಡ್ತಾರೆ ಎಂದಿರಬೇಕು. ರಾಜ್ಯ ಬಿಜೆಪಿ ಸರ್ಕಾರ ಸುಭದ್ರವಾಗಿದೆ. 3 ವರ್ಷ 3 ತಿಂಗಳ ಕಾಲ ನಾವೇ ಆಡಳಿತ ನಡೆಸುತ್ತೇವೆ. 2023ರಲ್ಲಿಯೂ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದ್ದಾರೆ.


ರಾಜ್ಯ ಬಿಜೆಪಿ ಸರ್ಕಾರ ಪೂರ್ಣಾವಧಿ ಮುಗಿಸುತ್ತೆ ಎಂದು ಸಿದ್ದರಾಮಯ್ಯ, ಕುಮಾರಸ್ವಾಮಿ ಸೇರಿದಂತೆ ಎಲ್ರೂ ಹೇಳ್ತಿದ್ದಾರೆ. ವಿರೋಧ ಪಕ್ಷಗಳೇ ಬೆಂಬಲ ನೀಡ್ತಿರುವಾಗ ಸಮಸ್ಯೆ ಎಲ್ಲಿದೆ? ಎಂದು ಅವರು ಪ್ರಶ್ನಿಸಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :