ಮಾಜಿ ಸಿಎಂ ಬಿಎಸ್ ವೈ ಹಾಕಿರೋ ಬಾಂಬ್ ಗೆ ರಾಜ್ಯ ಬಿಜೆಪಿ ತಲ್ಲಣಗೊಂಡಿದೆ.ಕಲಬುರಗಿಯಲ್ಲಿ ಕೊಟ್ಟಿರೋ ಒಂದೇ ಒಂದು ಸ್ಟೇಟ್ ಮೆಂಟ್ ಹಾಲಿ ಬಿಜೆಪಿ ಶಾಸಕರ ಮನೋಬಲವನ್ನೇ ಕುಗ್ಗಿಸಿದೆ. ಯಡಿಯೂರಪ್ಪನವ್ರೇ ಈ ಮಾತನ್ನ ಹೇಳಿದ್ರೋ ಇಲ್ಲಾ ಅವರ ಬಾಯಿಂದ ಹೈಕಮಾಂಡ್ ಹೇಳಿಸಿದ್ಯೋ ಅಂತ ಒಳಗೊಳಗೇ ಎದೆ ಬಡಿದುಕೊಳ್ತಿದ್ದಾರೆ ಶಾಸಕರು.. ಚುನಾವಣೆಯ ಹೊತ್ತಲ್ಲೇ ಮಾಜಿ ಸಿಎಂ ಹೇಳಿಕೆ ಪಕ್ಷದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು ಗುಜರಾತ್ ಮಾಡಲ್ ಬಂದೇ ಬಿಡ್ತಾ ಅನ್ನೋ ಆತಂಕ ಶುರುವಾಗಿದೆ