Widgets Magazine

ಇಂದು ರಾಜ್ಯ ಬಜೆಟ್ ಮಂಡನೆ; ವಾಣಿಜ್ಯ ತೆರಿಗೆ ಇಲಾಖೆಗೆ 82,443 ಕೋಟಿ ಸಂಗ್ರಹಣೆ ಗುರಿ

ಬೆಂಗಳೂರು| pavithra| Last Modified ಗುರುವಾರ, 5 ಮಾರ್ಚ್ 2020 (12:08 IST)
ಬೆಂಗಳೂರು : ಸಿಎಂ ಯಡಿಯೂರಪ್ಪ ಅವರು ಇಂದು 2020-21ನೇ ಸಾಲಿನ ರಾಜ್ಯ ಬಜೆಟ್ ಮಂಡನೆಮಾಡಿದ್ದು, ಇದರಲ್ಲಿ ತೆರಿಗೆ ಇಲಾಖೆಗೆ 82,443 ಕೋಟಿ ಸಂಗ್ರಹಣೆ ಗುರಿಯನ್ನು ಹೊಂದಿದೆ.

ಮದ್ಯದ ಸ್ಲ್ಯಾಬ್ ನ ಹಾಲಿ ದರದ ಮೇಲೆ ಶೇ.6ರಷ್ಟು ಹೆಚ್ಚಳ. ಅಬಕಾರಿ ಇಲಾಖೆಗೆ 22,700 ಕೋಟಿ ಸಂಗ್ರಹಣೆ ಗುರಿ. ಪೆಟ್ರೋಲ್ ಮೇಲಿನ ತೆರಿಗೆ ಶೇ.32ರಿಂದ ಶೇ.35ಕ್ಕೆ ಏರಿಕೆ. ತೆರಿಗೆ ಹೊರೆಯಿಂದ ಪೆಟ್ರೋಲ್ ದರ ಲೀಟರ್ ಗೆ 1.60 ರೂ.ಏರಿಕೆ. ಡಿಸೇಲ್ ಮೇಲಿನ ತೆರಿಗೆ ದರ ಶೇ.21 ರಿಂದ ಶೇ.24ಕ್ಕೆ ಏರಿಕೆ. ತೆರಿಗೆ ಹೊರೆಯಿಂದ ಡಿಸೇಲ್ ಬೆಲೆ 1.59ರೂ. ಹೆಚ್ಚಳ ಮಾಡಲಾಗಿದೆ.

 

ಅಪಾರ್ಟ್ ಮೆಂಟ್ ನೋಂದಣಿ ಮುದ್ರಾಂಕ ಶುಲ್ಕ ಕಡಿತ. 20 ಲಕ್ಷಕ್ಕಿಂತ ಕಡಿಮೆ ಮೌಲ್ಯದ ಅಪಾರ್ಟ್ ಮೆಂಟ್ ಗೆ ಶೇ.5ರಿಂದ ಶೇ.2ಕ್ಕೆ  ನೋಂದಣಿ ಮುದ್ರಾಂಕ ಶುಲ್ಕ ಕಡಿತ ಮಾಡಲಾಗಿದೆ.




ಇದರಲ್ಲಿ ಇನ್ನಷ್ಟು ಓದಿ :