ಇರಾನ್ ಭದ್ರತಾ ಸಿಬ್ಬಂದಿಗಳಿಂದ ಬಂಧಿಸಲ್ಪಟ್ಟಿದ್ದ ಆರು ಜನ ಉತ್ತರ ಕನ್ನಡ ಜಿಲ್ಲೆಯ ಮೀನುಗಾರರನ್ನು ಇರಾನ್ ನ್ಯಾಯಾಲಯ ಬಿಡುಗಡೆಗೊಳಿಸಿದೆ.ದುಬೈ ನಿಂದ ಮೀನುಗಾರಿಕೆಗೆ ತೆರಳಿದ್ದ ಉತ್ತರ ಕನ್ನಡ ಮೂಲದ 18 ಜನ ಮೀನುಗಾರರನ್ನು ಸೀಮಾ ಉಲ್ಲಂಘನೆ, ನಿಷೇಧಿತ ಪ್ರದೇಶದಲ್ಲಿ ಟೈಗರ್ ಫಿಷ್ ಬೇಟೆ ಮಾಡಿದ ಹಿನ್ನೆಲೆಯಲ್ಲಿ ಬೋಟ್ ನೊಂದಿಗೆ ಇರಾನ್ ನೌಕಾಪಡೆ ಸಿಬ್ಬಂದಿ ವಶಕ್ಕೆ ಪಡೆದಿದ್ದರು.ಜುಲೈ 27 ರಂದು 11 ಜನ ಹಾಗೂ ಆಗಸ್ಟ್ 25 ರಂದು ಏಳು ಜನ ಗಡಿ ಉಲ್ಲಂಘಿಸಿ