ರಾಜ್ಯ ಸರಕಾರಿ ನೌಕರರು ನಡೆಸುವ ಪ್ರತಿಭಟನೆಗೆ ಸರಕಾರ ಯಾವುದೇ ರೀತಿಯ ಬೆದರಿಗೆ ಒಡ್ಡಿಲ್ಲ. ಆದರೆ, ರಾಜ್ಯ ಪೊಲೀಸರು ನಡೆಸುವ ಪ್ರತಿಭಟನೆಗೆ ಬೆದರಿಕೆ ಒಡ್ಡಿ ಅವರ ನ್ಯಾಯಯುತವಾದ ಬೇಡಿಕೆಯನ್ನು ಸರಕಾರ ಹತ್ತಿಕ್ಕುತ್ತಿದೆ. ಪೊಲೀಸರು ಸಹ ರಾಜ್ಯ ಸರಕಾರದ ನೌಕರರಲ್ಲವೇ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಪ್ರಶ್ನಿಸಿದ್ದಾರೆ.