ಬೆಂಗಳೂರು : ವಿಪಕ್ಷಗಳ ಟೀಕೆ ಟಿಪ್ಪಣಿಗೆ ರಾಜ್ಯ ಸರ್ಕಾರ ಸ್ಪಂದಿಸಲಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಕೊರೊನಾ ಸೋಂಕು ಬಂದು ವರ್ಷವಾಗಿದೆ. ಈ ಅವಧಿಯಲ್ಲಿ ಹಲವು ಅಡ್ಡಿ, ಆತಂಕ, ಸಮಸ್ಯೆ, ಸವಾಲುಗಳನ್ನು ರಾಜ್ಯ ಸರ್ಕಾರ ಎದುರಿಸಿದೆ. ಈಗ ಕೊವಿಡ್ ಎರಡನೇ ಅಲೆ ಅಪ್ಪಳಿಸಿದೆ. ತಜ್ಞರ ಜೊತೆ ಸಭೆ ನಡೆಸಿ ಸೋಂಕು ತಡೆಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಜತೆಗೂ ಸಭೆ ನಡೆಸಿದ್ದೇನೆ .ರಾಜ್ಯದ ಕ್ರಮಗಳನ್ನು ಪ್ರಧಾನಿ ಮೋದಿಗೆ