ಕಲಬುರಗಿಯಲ್ಲಿ ಫೆಬ್ರುವರಿ 5, 6 ಹಾಗೂ 7ರಂದು ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಜ್ಯದ ದೃಶ್ಯಕಲಾವಿದರಿಗಾಗಿ ಕಲಾ ಸ್ಪರ್ಧೆ ಆಯೋಜಿಸಲಾಗಿದೆ. ರಾಜ್ಯಮಟ್ಟದ ಚಿತ್ರ, ಶಿಲ್ಪ ಹಾಗೂ ಛಾಯಾಚಿತ್ರ ಕಲೆ ಸ್ಪರ್ಧೆ ಹಾಗೂ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು, ಇದಕ್ಕಾಗಿ ಅರ್ಹ ಕಲಾವಿದರಿಂದ ಕಲಾಕೃತಿಗಳನ್ನು ಆಹ್ವಾನಿಸಲಾಗಿದೆ.ಕಲಾಕೃತಿಗಳು ಡ್ರಾಯಿಂಗ, ಪೇಂಟಿಂಗ ಹಾಗೂ ಗ್ರಾಫಿಕ್ ಪ್ರಕಾರಗಳಲ್ಲಿ ರಚನೆಯಾಗಿರಬೇಕು. ಕಲಾಕೃತಿಗಳು ಜಲವರ್ಣ, ತೈಲವರ್ಣ, ಡ್ರಾಯಿಂಗ ಅಥವಾ ಮಿಶ್ರಮಾಧ್ಯಮಗಳಲ್ಲಿ ಒಂದಾಗಿರಬೇಕು. ಕಲಾಕೃತಿ ಅಳತೆಯು 3*3 ಅಡಿ