ಕರ್ನಾಟಕ ರಾಜ್ಯ , ಪೊಲೀಸ್ ರಾಜ್ಯ- ಟಿ. ಸಿ ಶರವಣ ,ಕರ್ನಾಟಕ ಜುವೆಲ್ಲರಿ ಅಸೋಸಿಯೇಷನ್ ಅಧ್ಯಕ್ಷ

bangalore| Geetha| Last Modified ಮಂಗಳವಾರ, 7 ಸೆಪ್ಟಂಬರ್ 2021 (19:40 IST)
ಕರ್ನಾಟಕ ರಾಜ್ಯ , ಪೊಲೀಸ್ ರಾಜ್ಯವಾಗಿದೆ . ಕ್ರೈಮ್ ರೇಟ್, ಕಾನೂನು ಸುವ್ಯವಸ್ಥೆ  ಹಾಳಾಗಿದೆ ಅಂತ ಆರೋಪಿಸಿ ಗೋಲ್ಡ್ ಜುವೆಲರಿಯವರು ಶರವಣ ನೇತೃತ್ವದಲ್ಲಿ ಇಂದು ಗೃಹ ಮಂತ್ರಿ ಅರಗ ಜ್ಞಾನೇಂದ್ರ ಅವರನ್ನು ಭೇಟಿ ಮಾಡಿದ್ರು. ಚಿನ್ನದಂಗಡಿ
ಮಾಲೀಕರನ್ನು ಪೊಲೀಸ್ ರು  ಕಿರುಕುಳ ಮಾಡುತ್ತಾರೆ. ಬಿಕ್ಷಕರ ರೀತಿ ವರ್ತನೆ ಮಡುತ್ತಿದ್ದರೆ. ಯಾರೋ ತಂದು ಮಾರಿದ ಚಿನ್ನವನ್ನು, ಇದು ಕದ್ದಿರುವ ಚಿನ್ನ ಅಂತ ಡಬಲ್ ಚಿನ್ನ ರಿಕವರಿ ಮಡುತ್ತಿದ್ದರೆ. ಕಳ್ಳರನ್ನು ಪೊಲೀಸರು ಫಿಕ್ಸ್ ಮಾಡಿಕೊಂಡಿರೋದು ಮೇಲ್ನೋಟಕ್ಕೆ ಕಂಡು ಬರುತ್ತಿದೆ . ರಾಜ್ಯದ ವಿವಿಧ ಜಿಲ್ಲೆಯ ಚಿನ್ನದ ವ್ಯಾಪಾರಿಗಳು ಇದರಿಂದ ಸಮಸ್ಯೆಗೆ ಒಳಾಗಿದ್ದರೆ ಅಂತ ಗೃಹ ಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ್ರು. ಬಳಿಕ ಮಾತನಾಡಿ ಪೊಲೀಸರು ಯಾರನ್ನೇ ವಶಕ್ಕೆ ಪಡೆದ್ರು ನೋಟಿಸ್ ನೀಡಿ , ವಿಡಿಯೋ ಮಾಡಿ, ಪೊಲೀಸ್ ಡ್ರೆಸ್ ನಲ್ಲಿ ವಶಕ್ಕೆ ಪಡೆಯಬೇಕು  ಆದ್ರೆ ಇದ್ಯಾವುದೂ ನಡೆಯುತ್ತಿಲ್ಲ ಇದು ಪ್ರಜಾಪ್ರಭುತ್ವ ವ್ಯವಸ್ಥೆ ಅಲ್ಲ ಅಂತ ಆಕ್ರೋಶ ಹೊರ ಹಾಕಿದ್ರು . 


ಇದರಲ್ಲಿ ಇನ್ನಷ್ಟು ಓದಿ :