ಆತ ವೃದ್ಧ ತಂದೆ, ತಾಯಿ ಹಾಗೂ ಪತ್ನಿ, ಮೂವರು ಮಕ್ಕಳಿಗೆ ಆಸರೆಯಾಗಿದ್ದವನು. ಕುಟುಂಬ ನಿರ್ವಹಣೆಗೆಂದು ಸೌದಿ ಅರೇಬಿಯಾಕ್ಕೆ ತೆರಳಿದ್ದ. ಆತ ಪ್ರತಿನಿತ್ಯ ಪತ್ನಿಗೆ ಫೋನ್ ಮಾಡಿ ಮಾತನಾಡುತ್ತಿದ್ದ. ಆದರೆ ಕಳೆದ ನಾಲ್ಕು ದಿನಗಳ ಹಿಂದೆ ಫೋನ್ ಬಾರದ ಪತ್ನಿಗೆ ಬಂದ ಆ ಒಂದು ಕಾಲ್ ಅವರ ಬಾಳಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಸುಂಬಡ ಗ್ರಾಮದ ನಿವಾಸಿಯಾಗಿರುವ ಕವಿತಾ ಪತಿ ಗೊಲ್ಲಾಳಪ್ಪ ಕಳೆದ 20 ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ