ಸಚಿವಸ್ಥಾನಕ್ಕೆ ರಾಜೀನಾಮೆ ನೀಡಿರುವ ಎನ್. ಮಹೇಶ್ ಪರ ಪುಟ್ಟರಂಗಶೆಟ್ಟಿ ಬ್ಯಾಟಿಂಗ್ ಮಾಡಿದ್ದಾರೆ.ಎನ್. ಮಹೇಶ್ ಸಚಿವ ಸಂಪುಟದಲ್ಲಿರಬೇಕಿತ್ತು. ನಾವಿಬ್ಬರು ಒಂದೇ ಜಿಲ್ಲೆಯವರಾಗಿದ್ದೇವೆ. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಅವರು ಸಂಪುಟದಲ್ಲಿರಬೇಕಿತ್ತು. ವೈಯುಕ್ತಿಕ ವಾಗಿ ನಾವಿಬ್ಬರು ಚೆನ್ನಾಗಿದ್ದೇವೆ ಎಂದು ಚಾಮರಾಜನಗರ ಉಸ್ತುವಾರಿ ಸಚಿವರೂ ಆಗಿರುವ ಪುಟ್ಟರಂಗಶೆಟ್ಟಿ ಹೇಳಿದ್ದಾರೆ.ಅವರ, ನನ್ನ ಭಿನ್ನಾಭಿಪ್ರಾಯ ಕೇವಲ ಪಕ್ಷದ ವಿಚಾರಗಳಿಗೆ ಸಂಬಂಧ ಪಟ್ಟಿದ್ದಾಗಿದೆ. ನಮ್ಮ ಪಕ್ಷದ ಬಗ್ಗೆ ಬೇರೆ ಬೇರೆ ಹೇಳಿಕೆ ನೀಡಿದ್ದು ತಪ್ಪು ಎಂದು ಹೇಳಿದ್ದೆ ಅಷ್ಟೆ.ಅವರು ಸಂಪುಟದಿಂದ