ಕಾಂಗ್ರೆಸ್ ನಲ್ಲಿ ಎಡಗೈ ಮಾದಿಗ ಸಮುದಾಯಕ್ಕೆ ಅನ್ಯಾಯವಾಗುತ್ತಿದ್ದು, ಈ ಸಮುದಾಯದ ಆರ್.ಬಿ.ತಿಮ್ಮಾಪೂರ ಅವರಿಗೆ ಸಕ್ಕರೆ ಖಾತೆಯ ಜೊತೆಗೆ ಒಳನಾಡು ಸಾರಿಗೆ ಮತ್ತು ಬಂದರು ಖಾತೆಯಂತಹ ಉತ್ತಮ ಖಾತೆಯನ್ನು ನೀಡಬೇಕಂತೆ.ಹೀಗಂತ ಒತ್ತಾಯಿಸಿ ಕಾಂಗ್ರೆಸ್ ಮಾದಿಗ ಮುಖಂಡರು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಮಾಡಿದ್ದಾರೆ. ರಾಜ್ಯದ ಪರಿಶಿಷ್ಟ ಜಾತಿ ಮತ್ತು ವರ್ಗಗಳಲ್ಲಿ ಎಡಗೈ ಮಾದಿಗ ಸಮುದಾಯದ ಜನಸಂಖ್ಯೆಯೇ ಹೆಚ್ಚಿದ್ದರೂ ಪಕ್ಷದಲ್ಲಿ ಈ ಸಮುದಾಯಕ್ಕೆ