ಕೋಲಾರ ನಗರದ SNR ಜಿಲ್ಲಾಸತ್ರೆಯಿಂದ ಗುರುವಾರ ಸಂಜೆ ಮಹಿಳೆಯರು ಅಪಹರಿಸಿದ್ದ ಶಿಶುವನ್ನು ತಮಿಳುನಾಡಿನಲ್ಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಮೂವರು ಮಹಿಳೆಯರು ನವಜಾತ ಗಂಡು ಶಿಶುವನ್ನು ಬ್ಯಾಗ್ನಲ್ಲಿ ಇಟ್ಟುಕೊಂಡು ಆಟೊದಲ್ಲಿ ಪರಾರಿಯಾದ ದೃಶ್ಯ CCTV ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಸುಳಿವಿನ ಮೇಲೆ ಕಾರ್ಯಾಚರಣೆ ಕೈಗೊಂಡ ಕೋಲಾರ ವಿಭಾಗದ ಡಿವೈಎಸ್ಪಿ ಮಲ್ಲೇಶ್ ನೇತೃತ್ವದ ತಂಡ ಆರೋಪಿಗಳನ್ನು ಕೇವಲ 6 ಗಂಟೆಗಳೊಳಗೆ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಇನ್ಸ್ಪೆಕ್ಟರ್ಗಳಾದ ಹರೀಶ್, ವಸಂತ್, ಶಂಕರಾಚಾರ್ಯ, ತಾಂತ್ರಿಕ