ಕಳೆದ ಮಂಗಳವಾರದಂದು ಹತ್ಯೆಯಾಗಿದ್ದ ಬಿಜೆಪಿ ಕಾರ್ಯಕರ್ತ ಜುಬೈರ್ ನಿವಾಸಕ್ಕೆ ಭೇಟಿ ನೀಡಲು ಆಗಮಿಸಿದ ಸಚಿವ ಯು.ಟಿ.ಖಾದರ್ ಕಾರಿನ ಮೇಲೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟಕ್ಕೆ ಯತ್ನ ನಡೆಸಿದ ಘಟನೆ ವರದಿಯಾಗಿದೆ. ಜುಬೈರ್ ಹತ್ಯೆಯಾದಾಗ ಮೃತದೇಹ ನೋಡಲು ಬಾರದ ಸಚಿವ ಖಾದರ್, ಇದೀಗ ಜುಬೇರ್ ನಿವಾಸಕ್ಕೆ ಭೇಟಿ ನೀಡುತ್ತಿರುವುದು ಬಿಜೆಪಿ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿತ್ತು ಎಂದು ಮೂಲಗಳು ತಿಳಿಸಿವೆ. ಜುಬೈರ್ ನಿವಾಸಕ್ಕೆ ಭೇಟಿ ನೀಡಿ ಸಚಿವ ಖಾದರ್ ಕಾರಿಗೆ ಬಿಜೆಪಿ