ಬಾಗಲಕೋಟೆ ಜಿಲ್ಲೆ ಜಮಖಂಡಿಯಲ್ಲಿ ಅತೃಪ್ತರ ಮನವೊಲಿಸಿ ಕಾಂಗ್ರೆಸ್ಗೆ ಸೆಡ್ಡು ಹೊಡೆಯಲು ಬಿಜೆಪಿ ಅಭ್ಯರ್ಥಿ ಮುಂದಾಗಿದ್ದಾರೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಜಮಖಂಡಿ ಬಿಜೆಪಿ ನಾಯಕರು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಜಮಖಂಡಿ ಕ್ಷೇತ್ರದ ಕಾಂಗ್ರೆಸ್ ಯುವ ಶಾಸಕ ಆನಂದ್ ನ್ಯಾಮಗೌಡಗೆ ಖೆಡ್ಡಾ ತೋಡಲು ಬಿಜೆಪಿ ರೆಡಿಯಾಗಿದೆ.. ಕಾಂಗ್ರೆಸ್ನ ಭದ್ರಕೋಟೆ ಛಿದ್ರಗೊಳಿಸಲು ರಾಷ್ಟ್ರೀಯ ನಾಯಕರನ್ನು ಕರೆತರುವ ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.. ರಾಜನಾಥ್ ಸಿಂಗ್ ಭೇಟಿ ಬೆನ್ನಲ್ಲೆ ಯೋಗಿ ಆದಿತ್ಯನಾಥ್ ಕರೆತರಲು ಪ್ಲ್ಯಾನ್