ಚಲಿಸುತ್ತಿದ್ದ ರೈಲಿಗೆ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಚಿಂತಾಮಣಿಯಲ್ಲಿ ರೈಲಿಗೆ ಸಿಲುಕಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆ.ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಉಪ್ಪರಪೇಟೆ ಸಮೀಪ ರೈಲುಕಿ ಸಿಲುಕಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಅತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಚಾಕವೇಲು ಹೋಬಳಿಯ ಕೊಂಡಮಾವರಪಲ್ಲಿ ಗ್ರಾಮದ ಚಿನ್ನಪ್ಪರೆಡ್ಡಿ ಎಂಬುವರ ಪುತ್ರ ಕೆಸಿ.ಮೋಹನ್ ಎಂದು ಗುರುತಿಸಲಾಗಿದೆ.ವಿಷಯ ತಿಳಿದ ಕೂಡಲ್ಲೆ ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಪೊಲೀಸರು ಮತ್ತು ಬಂಗಾರಪೇಟೆ ರೈಲ್ವೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.