ಕಲಬುರಗಿ : ಸೈಕಲ್ ವಿಚಾರದಲ್ಲಿ ಗಲಾಟೆ ನಡೆದು ಪಿಯುಸಿ ವಿದ್ಯಾರ್ಥಿಯನ್ನು ಅಪಹರಣ ಮಾಡಿಲಾಗಿದೆ ಎಂಬ ಆರೋಪ ವಿವಿ ಠಾಣಾ ವ್ಯಾಪ್ತಿಯಲ್ಲಿ ಕೇಳಿಬಂದಿದೆ.ಮೂರು ದಿನಗಳ ಹಿಂದೆ ಟ್ಯೂಷನ್ಗೆ ಹೋಗಿ ಬರುವುದಾಗಿ ಹೇಳಿ ಹೋದವ ಇಲ್ಲಿವರೆಗೆ ಮನೆಗೆ ಬಾರದ ಕಾರಣ ಪೋಷಕರು ಆತಂಕದಲ್ಲಿದ್ದಾರೆ.ನಗರದ ಪ್ರತಿಷ್ಠಿತ ಕಾಲೇಜೊಂದರಲ್ಲಿ ಪಿಯುಸಿ ಸೈನ್ಸ್ ಓದುತ್ತಿರುವ ಸಂತೋಷ್ ಚೌವ್ಹಾಣ್(17) ಕಿಡ್ನಾಪ್ ಆಗಿರುವ ವಿದ್ಯಾರ್ಥಿ.ಕಲಬುರಗಿಯ ಶಹಬಾದ ರಸ್ತೆ ಮಾತಾ ಮಾಣಿಕೇಶ್ವರಿ ಕಾಲೋನಿ ನಿವಾಸಿಯಾದ ಸಂತೋಷ್, ಪ್ರತಿನಿತ್ಯ ಕಾಲೇಜು ಹಾಗೂ ಮನೆಗೆ