ವಿದ್ಯಾದೇಗುಲದಲ್ಲಿ ನೆತ್ತರು ಹರಿದಿದೆ. ಸಹಪಾಠಿಗಳೇ ವಿದ್ಯಾರ್ಥಿಯೊಬ್ಬನನ್ನ ಚಾಕುವಿನಿಂದ ಚುಚ್ಚಿ ಕೊಂದಿರುವ ಘಟನೆ ಯಲಹಂಕದ ಸರ್ಕಾರಿ ಶಾಲೆಯಲ್ಲಿ ನಡೆದಿದೆ. 16 ವರ್ಷದ ಹರ್ಷಾ ಕೊಲೆಯಾದ ವಿದ್ಯಾರ್ಥಿ. ಇವತ್ತು ಶಾಲೆಯಲ್ಲಿ ವಾರ್ಷಿಕೋತ್ಸವ ನಡೆಯುತ್ತಿತ್ತು. ಈ ಸಂದರ್ಭ ಜಗಳ ನಡೆದು ಹರ್ಷನಿಗೆ ಚಾಕುವಿನಿಂದ ಚುಚ್ಚಲಾಗಿದೆ. ಬಳಿಕ ಶಿಕ್ಷಕರು ವಿದ್ಯಾರ್ಥಿಯನ್ನ ಆಸ್ಪತ್ರೆಗೆ ದಾಖಲಿಸಸುವ ಪ್ರಯತ್ನ ನಡೆಸಿದರೂ ಮಾರ್ಗ ಮಧ್ಯೆಯೇ ಹರ್ಷನ ಪ್ರಾಣಪಕ್ಷಿ ಹಾರಿಹೋಗಿತ್ತು.ಪ್ರಕರಣ ಸಂಬಂದ ವರನ್ನ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಕ್ಷುಲ್ಲಕ ಕಾರಣಕ್ಕೆ