ಉಚಿತ ಬಸ್ ಪಾಸ್ ಗಾಗಿ ಪೊಲೀಸರ ಲಾಠಿ ಏಟಿಗೆ ಬೆದರಿದ್ದ ವಿದ್ಯಾರ್ಥಿ ಮುಖಂಡರು ಮಾಧ್ಯಮಗಳ ಮುಂದೆ ಕಾಣಿಸಿಕೊಂಡ್ರು. ತುಮಕೂರಿನ ಎಸ್.ಎಸ್.ವೃತ್ತದಲ್ಲಿ ಪ್ರತಿಭಟನೆ ವೇಳೆ ಪೊಲೀಸರು ಏಕಾಏಕಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದಾರೆ ಅಂತಾ ಮಾಜಿ ಸಚಿವ ಸೊಗಡು ಶಿವಣ್ಣ ಸಮ್ಮುಖದಲ್ಲಿ ಮಾಧ್ಯಮಗಳ ಮುಂದೆ ತಮ್ಮ ನೋವನ್ನ ತೋಡಿಕೊಂಡ್ರು. ಈ ಬಗ್ಗೆ ಮಾತ್ನಾಡಿದ ಮಾಜಿ ಸಚಿವ ಸೊಗಡು ಶಿವಣ್ಣ, ಎಬಿವಿಪಿ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ ಪ್ರಕರಣವನ್ನ ತೀವ್ರವಾಗಿ ಖಂಡಿಸಿದ್ರು. ಪೊಲೀಸರ ದೌರ್ಜನ್ಯ