ಬೆಂಗಳೂರು: ಮಧ್ಯಪಾನ ಮಾಡಿ ಕಾಲೇಜು ತರಗತಿಗೆ ಬಂದ ಇಬ್ಬರು ವಿದ್ಯಾರ್ಥಿಗಳಿಗೆ ಪ್ರಿನ್ಸಿಪಾಲ್ ಬೈದರೆಂದು ಅವಮಾನ ತಾಳಲಾರದೆ ಕಾಲೇಜು ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಬೆಂಗಳೂರಿನ ಜಾಲಹಳ್ಳಿಯ ಖಾಸಗಿ ಕಾಲೇಜೊಂದರಲ್ಲಿ ಈ ಘಟನೆ ನಡೆದಿದೆ. ಕೂಡಲೇ ಯುವಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಇಬ್ಬರು ವಿದ್ಯಾರ್ಥಿಗಳು ಪಾನಮತ್ತರಾಗಿ ಬಂದಿದ್ದನ್ನು ಗಮನಿಸಿದ ಶಿಕ್ಷಕರು ಪ್ರಿನ್ಸಿಪಾಲರಿಗೆ ದೂರು ನೀಡಿದ್ದರು. ಇವರನ್ನು ಕರೆಸಿ ಚೆನ್ನಾಗಿ ಬೈದ ಪ್ರಾಂಶುಪಾಲರು ಮತ್ತೆ ತಪ್ಪು ಮರುಕಳಿಸಿದರೆ ತಕ್ಕ ಶಿಕ್ಷೆ ಎದುರಿಸಬೇಕಾದೀತು ಎಂದು ಎಚ್ಚರಿಸಿದ್ದರು. ಘಟನೆಯಿಂದ ಅವಮಾನಕ್ಕೊಳಗಾದ