ಈ ಜಿಲ್ಲೆಯ 407 ಮಕ್ಕಳು ಪರೀಕ್ಷಾ ಕೇಂದ್ರ ಬದಲಾವಣೆ ಮಾಡಿಕೊಂಡಿದ್ದಾರೆ. ಕೊರೊನಾ ಸೋಂಕು ಹಿನ್ನೆಲೆಯಲ್ಲಿ, ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಸಜ್ಜಾಗಿರುವ ವಿದ್ಯಾರ್ಥಿಗಳು ಸುರಕ್ಷಿತವಾಗಿ ಪರೀಕ್ಷೆ ಬರೆಯಲಿ ಎಂಬ ಉದ್ದೇಶದಿಂದ ಮಾಸ್ಕ್ ತಯಾರಿಸಲು ಶಿಕ್ಷಣ ಇಲಾಖೆ ಹೊಲಿಗೆ ಶಿಕ್ಷಕರಿಗೆ ಸೂಚನೆ ನೀಡಿದ ಹಿನ್ನಲೆ ಹಾವೇರಿ ಜಿಲ್ಲೆಯ 60 ಹೊಲಿಗೆ ಶಿಕ್ಷಕರು ಬರೋಬ್ಬರಿ 8,500 ಕಾಟನ್ ಮಾಸ್ಕ್ಗಳನ್ನು ತಯಾರಿಸಿದ್ದಾರೆ.ಹೀಗಂತ ಡಿಡಿಪಿಐ ಅಂದಾನಪ್ಪ ವಡಗೇರಿ ತಿಳಿಸಿದ್ದಾರೆ. ದಾನಿಗಳಿಂದ ಸಂಗ್ರಹವಾದ ಹಣದಲ್ಲಿ ಬಟ್ಟೆ ಖರೀದಿಸಿ, ಶಿಕ್ಷಕರಿಗೆ