ಇಂದಿನಿಂದ ಉಪನೋಂದಣಿ ಕಚೇರಿ ಓಪನ್

ಬೆಂಗಳೂರು| Krishnaveni K| Last Modified ಸೋಮವಾರ, 7 ಜೂನ್ 2021 (10:07 IST)
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಇಳಿಕೆಯಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಕೆಲವೊಂದಕ್ಕೆ ವಿನಾಯ್ತಿ ನೀಡಲು ಆರಂಭಿಸಿದೆ.
 

ಇಂದಿನಿಂದ ರಾಜ್ಯದಲ್ಲಿ ಉಪನೋಂದಣಿ ಕಚೇರಿಗಳು ಪುನರ್ ಕಾರ್ಯಾರಂಭ ಮಾಡಲಿವೆ. ಲಾಕ್ ಡೌನ್ ವೇಳೆ ಉಪನೋಂದಣಿ ಕಚೇರಿಗಳನ್ನು ಬಂದ್ ಮಾಡಲಾಗಿತ್ತು.
 
ಇದೀಗ ಎಲ್ಲಾ ರೀತಿಯ ಕೋವಿಡ್ ನಿಯಮಗಳನ್ನು ಪಾಲಿಸಿ ಕಾರ್ಯಾರಂಭಿಸಲಿವೆ. ರಾಜ್ಯ ಸರ್ಕಾರದ ಆದೇಶದ ಹಿನ್ನಲೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಈ ಸೂಚನೆ ನೀಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :