ಅಗಲಿದ ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ಪ್ರಮುಖರು ಶೋಕ ವ್ಯಕ್ತಪಡಿಸಿದ್ದಾರೆ. ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರಿಂದ ಶ್ರದ್ಧಾಂಜಲಿ ಸಲ್ಲಿಕೆ ಮಾಡಲಾಗಿದೆ. ಅಗಲಿದ ಅಜಾತಶತೃವಿಗೆ ಕಂಬನಿ ಮಿಡಿದ ಕಾರ್ಯಕರ್ತರು ನೆಚ್ಚಿನ ನಾಯಕ ಇನ್ನಿಲ್ಲದಿರುವ ವಿಷಯಕ್ಕೆ ದಿಗ್ಬ್ರಮೆಗೊಂಡಿದ್ದಾರೆ. ಅಜಾತ ಶತೃ, ದೇಶ ಕಂಡ ಅದ್ವಿತೀಯ ನಾಯಕ ಅಟಲ್ ಜೀ ನಿಧನದ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿತ್ತು. ಶಾಸಕ ಜಿ.ಸೋಮಶೇಖರ್ ರೆಡ್ಡಿ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಶ್ರದ್ಧಾಂಜಲಿಯ ವೇಳೆ ಕಾರ್ಯಕರ್ತರು