93 ವರ್ಷ ಇಳಿವಯಸ್ಸಿನ ರೋಗಿಗೆ ಯಶಸ್ವಿ ಮೆದುಳು ಗಡ್ಡೆ ಶಸ್ತ್ರಚಿಕಿತ್ಸೆ

bangalore| geetha| Last Modified ಗುರುವಾರ, 7 ಅಕ್ಟೋಬರ್ 2021 (21:07 IST)
ಬೆಂಗಳೂರು: ಮೆದುಳು ಗಡ್ಡೆಯಿಂದ ಬಳಲುತ್ತಿದ್ದ 93 ವರ್ಷ ಇಳಿವಯಸ್ಸಿನ ರೋಗಿಗೆ ಶಸ್ತ್ರಚಿಕಿತ್ಸೆ ನಡೆಸಿದ ಫೋರ್ಟಿಸ್ ಆಸ್ಪತ್ರೆ ವೈದ್ಯರು, ಮೆದುಳಿನ ಗಡ್ಡೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. 
 
ಫೊರ್ಟಿಸ್ ಆಸ್ಪತ್ರೆ ಹೆಚ್ಚುವರಿ ನಿರ್ದೇಶಕರಾದ ಡಾ.ಸತೀಶ್ ಸತ್ಯನಾರಾಯಣ ಅವರ ತಂಡ ಈ ಯಶಸ್ವಿ ಶಸ್ತçಚಿಕಿತ್ಸೆ ನಡೆಸಿದೆ. ಬಳಿಕ ಮಾತಾಡಿದ ಅವರು, 93 ವರ್ಷದ ವ್ಯಕ್ತಿಯೊಬ್ಬರು ಕೋವಿಡ್‌ನಿಂದ ಬಳಲುತ್ತಿದ್ದರು. ನ್ಯುಮೋನಿಯಾ ಸೇರಿದಂತೆ ಇತರೆ ಕೋಮಾರ್ಬಿಡಿಟಿ ಸಮಸ್ಯೆಗೆ ತುತ್ತಾಗಿದ್ದರು. ಇಷ್ಟೆಲ್ಲಾ ಆರೋಗ್ಯ ಸಮಸ್ಯೆ ಇದ್ದರೂ ಮೆದುಳಿನಲ್ಲಿ ಗಡ್ಡೆ ಇರುವುದು ತಪಾಸಣೆ ಮೂಲಕ ತಿಳಿದು ಬಂದಿತು. 70 ವರ್ಷ ಮೇಲ್ಪಟ್ಟವರಿಗೆ ಶಸ್ತ್ರಚಿಕಿತ್ಸೆ ಮಾಡುವುದು ಅತ್ಯಂತ ಕಷ್ಟಕರ. ಅದರಲ್ಲೂ ಮೆದುಳಿನ ಚಿಕಿತ್ಸೆ ನಮಗೆ ಸವಾಲಾಗಿಯೇ ಪರಿಣಮಿಸಿತ್ತು. ಗಡ್ಡೆಯು ಮೆದುಳಿನ ಎಲೊಕ್ವೆಂಟ್ ಮೋಟಾರ್ ಕಾರ್ಟೆಕ್ಸ್ ಒಳಗೆ ಬೆಳೆದಿರುವುದು ತಿಳಿಯಿತು. ಮೊದಲೇ ಕೋವಿಡ್‌ನಿಂದ ಬಳಲಿದ್ದ ಇವರಿಗೆ ಇತರೆ ಶಸ್ತ್ರಚಿಕಿತ್ಸೆ ಸಾವು ಬದುಕಿನ ಹೋರಾಟವಾಗಿತ್ತು. ಆದಾಗ್ಯೂ ಅವರ ಕುಟುಂಬದ ಭರವಸೆಯೊಂದಿಗೆ ನಮ್ಮ ತಂಡ ಶಸ್ತçಚಿಕಿತ್ಸೆ ನಡೆಸಿತು. ರೋಗಿಯೂ ಕೇವಲ ನಾಲ್ಕು ದಿನಗಳಲ್ಲಿಯೇ ಚೇತರಿಸಿಕೊಂಡರು ಇದು ಅಪರೂಪದ ಪ್ರಕರಣಗಳಲ್ಲಿ ಒಂದು.


ಇದರಲ್ಲಿ ಇನ್ನಷ್ಟು ಓದಿ :