ಮಹಾರಾಷ್ಟ್ರ ನಾಂದೆಣಿ ಜೈನ ಮಠದ ಉತ್ತರಾಧಿಕಾರಿಯ ನೇಮಕದ ವಿಚಾರವಾಗಿ ವಿವಾದ ಭುಗಿಲೆದ್ದಿದೆ. ಹಾವೇರಿ ಜಿಲ್ಲೆಯ ಪ್ರವಾಸಿ ಮಂದಿರದಲ್ಲಿ ಇಬ್ಬರು ಜೈನ್ ಭಟ್ಟಾರಕರು ಜಂಟಿ ಸುದ್ದಿಗೋಷ್ಟಿಯನ್ನ ಏರ್ಪಡಿಸಿದ್ದರು.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾವು ನಾಂದೆಣಿ ಮಠದ ಶಿಷ್ಯ ಪರಂಪರೆಯವರು. ಆ ಮಠಕ್ಕೆ ನಮ್ಮಿಬ್ಬರಲ್ಲಿ ಯಾರಾದರು ಉತ್ತರಾಧಿಕಾರಿಯಾಗಬೇಕು ಅಂತದ್ರಲ್ಲಿ ನಾಂದೆಣಿ ಶಿಷ್ಯ ಪರಂಪರೆ ಅಲ್ಲದವರನ್ನ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡುತ್ತಿದ್ದಾರೆ ಎಂದು ದೂರಿದರು.ಅಷ್ಟೇ ಅಲ್ಲ ಆಯ್ಕೆಯ ವಿಚಾರವಾಗಿ ನಮ್ಮನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಕೆಲವೇ ಕೆಲವು