ಗದಗ : ದೇವಿ ಜಾತ್ರೆ ಮುಗಿಸಿ ಬರುತ್ತಿದ್ದ ವೇಳೆ ಬೊಲೆರೋ ವಾಹನ ಮೈಮೇಲೆ ಹರಿದ ಪರಿಣಾಮ ಇಬ್ಬರು ಬಾಲಕರು ಮೃತಪಟ್ಟ ಘಟನೆ ಶಿರಹಟ್ಟಿ ತಾಲೂಕಿನ ಶ್ರೀಮಂತಗಡ ಬಳಿ ನಡೆದಿದೆ. ಸಂದೀಪ್(12) ಹಾಗೂ ಮಾರುತಿ(10) ಮೃತಪಟ್ಟ ಬಾಲಕರು. ಇವರು ಶ್ರೀಮಂತಗಡ ಹೊಳಲಮ್ಮದೇವಿ ಜಾತ್ರೆ ಮುಗಿಸಿಕೊಂಡು ಇಳಿಜಾರು ಪ್ರದೇಶದಲ್ಲಿ ಬರುತ್ತಿರುವಾಗ ಹಿಂದಿನಿಂದ ವೇಗವಾಗಿ ಬಂದ ಬೊಲೆರೋ ನಿಯಂತ್ರಣ ತಪ್ಪಿ ಬಾಲಕರ ಮೈಮೇಲೆ ಹರಿದು ಮುಂದೆ ಹೋಗುತ್ತಿದ್ದ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದಿದೆ. ಈ