ಅಡ್ಡಾದಿಡ್ಡಿ ಕಾರು ಚಲಾಯಿಸಿದ್ದನ್ನು ಪ್ರಶ್ನಿಸಿದ ವೈದ್ಯರ ಮೇಲೆ ಸೂಡಾನ್ ವಿದ್ಯಾರ್ಥಿಗಳು ಹಲ್ಲೆ ನಡೆಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ನಗರದ ಅಗ್ರಹಾರದಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದ್ದು ಮೂವರು ಪುಂಡ ವಿದ್ಯಾರ್ಥಿಗಳು ಕಾರ್ತಿಕ್ ಉಡುಪಾ ಎಂಬ ವೈದ್ಯರ ಕಾರ್ನ್ನು ಓವರ್ ಟೇಕ್ ಮಾಡಲು ಹೋಗಿ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಕಾರ್ ನಿಲ್ಲಿಸಿದ ವೈದ್ಯರು ಈ ಕುರಿತು ಪ್ರಶ್ನಿಸಿದ್ದಕ್ಕೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಸೂಡಾನ್ ವಿದ್ಯಾರ್ಥಿಗಳು ಹಲ್ಲೆ ಕೂಡ ನಡೆಸಿದ್ದಾರೆ.