ಬೆಂಗಳೂರು: ದೇಶದಲ್ಲಿ ಏನೇ ಸಮಸ್ಯೆ ಸಂಭವಿಸಿದರೂ ಮೊದಲಿಗರಾಗಿ ಸ್ಪಂದಿಸುವ ಇನ್ಫೋಸಿಸ್ ಸಂಸ್ಥೆಯ ಸುಧಾಮೂರ್ತಿ ಮತ್ತು ನಾರಾಯಣ ಮೂರ್ತಿ ದಂಪತಿ ಈ ಬಾರಿಯೂ ಕೊರೋನಾ ಪರಿಹಾರಕ್ಕೆ ಭಾರೀ ಸಹಾಯ ಮಾಡಿದ್ದಾರೆ. ಈಗಾಗಲೇ ಕೆಲವು ಆಸ್ಪತ್ರೆಗಳ ನಿರ್ವಹಣೆ ಜವಾಬ್ಧಾರಿ ವಹಿಸಿರುವ ನಾರಾಯಣ ಮೂರ್ತಿ ದಂಪತಿ ಈಗ ಪರಿಹಾರ ನಿಧಿಗೆ 100 ಕೋಟಿ ರೂ. ದೇಣಿಗೆ ನೀಡುವ ಮೂಲಕ ಮತ್ತೆ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಸದಾ ತಮ್ಮ ಕೆಲಸಗಳಿಂದಲೇ ಇತರರಿಗೆ ಮಾದರಿಯಾಗಿರುವ ಸುಧಾಮೂರ್ತಿ ಹಾಗೂ ನಾರಾಯಣ