Widgets Magazine

ಕಾಂಗ್ರೆಸ್ ಹಾಗೂ ಮಾಜಿ ಸ್ಪೀಕರ್ ವಿರುದ್ಧ ಕಿಡಿಕಾರಿದ ಶಾಸಕ ಸುಧಾಕರ್

ಬೆಂಗಳೂರು| pavithra| Last Modified ಶನಿವಾರ, 3 ಆಗಸ್ಟ್ 2019 (11:15 IST)
ಬೆಂಗಳೂರು : ರಾಜೀನಾಮೆ ನೀಡಿ ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿ ಕಾಂಗ್ರೆಸ್ ನಿಂದ ಅನರ್ಹಗೊಂಡ ಶಾಸಕ ಸುಧಾಕರ್ ಅವರು ಕಾಂಗ್ರೆಸ್ ನ ವಿರುದ್ಧ ಕಿಡಿಕಾರಿದ್ದಾರೆ. 
ಇಂದು ಸಿಎಂ ಯಡಿಯೂರಪ್ಪ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ ಸುಧಾಕರ್ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, 'ಕಾಲರ್ ಎತ್ತಿಕೊಂಡು ಜನರ ಬಳಿ ಹೋದರೆ ಮತ ಕೊಡುವುದಿಲ್ಲ. ಕ್ಷೇತ್ರದಲ್ಲಿ ನಿರಂತರವಾಗಿ ಸೇವೆ ಸಲ್ಲಿಸಿದವರನ್ನು ಮತದಾರರು ಆಯ್ಕೆ ಮಾಡುತ್ತಾರೆ. ಯಾರೋ ಇಲ್ಲಿ ಒಬ್ಬರು ಬೊಬ್ಬೆ ಹೊಡೆದ ತಕ್ಷಣ ಜನರು ಹೆದರುವುದಿಲ್ಲ. ಆ ರೀತಿ ಬೆದರುವುದಾಗಿದ್ದರೆ ಲೋಕಸಭೇ ಚುನಾವಣೆಯಲ್ಲಿ ಏಕೆ ಕಾಂಗ್ರೆಸ್ ಒಂದು ಸ್ಥಾನವನ್ನು ಮಾತ್ರ ಗೆಲ್ಲುತ್ತಿತ್ತು?’ ಎಂದು ಹೇಳುವುದರ ಮೂಲಕ ಡಿಕೆಶಿವಕುಮಾರ್ ಅವರಿಗೆ ಟಾಂಗ್ ನೀಡಿದ್ದಾರೆ.


ಹಾಗೇ ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ವಿರುದ್ಧ ವಾಗ್ದಾಳಿ ನಡೆಸಿದ ಸುಧಾಕರ್​, 'ರಮೇಶ್ ಕುಮಾರ್ ಮೌಲ್ಯಗಳಿಗೆ ಪ್ರತಿಪಾದಕರಂತೆ ನಟಿಸುತ್ತಾರೆ. ಅವರ ಆದೇಶ ಅನೈತಿಕವಾಗಿದೆ. ಅದನ್ನ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ್ದೇವೆ. ವ್ಯವಸ್ಥೆಯಲ್ಲಿ ನಂಬಿಕೆ ಇದೆ,' ಎಂದು ತಿಳಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :