ಚಿಕ್ಕಬಳ್ಳಾಪುರ : ಮಡಿಕೇರಿ ಚಲೋ ರದ್ದು ಮಾಡಿದ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಸಚಿವ ಸುಧಾಕರ್ ಕೋಟಿ-ಕೋಟಿ ನಮನ ಸಲ್ಲಿಸಿದ್ದಾರೆ.ಚಿಕ್ಕಬಳ್ಳಾಪುರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಡವಾಗಿ ಆದರೂ ಸಿದ್ದರಾಮಯ್ಯ ಅವರಿಗೆ ಜ್ಞಾನೋದಯ ಆಗಿದ್ದಕ್ಕೆ ಕೋಟಿ ನಮನ ಸಲ್ಲಿಸುತ್ತೇನೆ. ರಾಜ್ಯದಲ್ಲಿ ಎಲ್ಲರೂ ಸುರಕ್ಷಿತವಾಗಿ ಇರಬೇಕು.ಕರುನಾಡು ಶಾಂತಿಯುತ ರಾಜ್ಯ, ರಾಜ್ಯದ ಹಿರಿಮೆ ಹೆಚ್ಚು ಮಾಡುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.