ಚಿಕ್ಕಬಳ್ಳಾಪುರ: ನಮ್ಮ ಎಲ್ಲಾ ಅನರ್ಹ ಶಾಸಕರ ಅಜ್ಞಾತವಾಸ ಇಂದಿಗೆ ಅಂತ್ಯವಾಗಲಿದೆ ಎಂದು ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಚಿಕ್ಕಬಳ್ಳಾಪುರದಲ್ಲಿ ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳುವ ರಾಜಕಾರಣಿಗಳಿಗೆ ಈ ಚುನಾವಣಾ ಫಲಿತಾಂಶ ಆದರ್ಶವಾಗಲಿದೆ. ನಮ್ಮಂತವರಿಗೆ ಈ ಚುನಾವಣೆಯ ಮೂಲಕ ನ್ಯಾಯ ಸಿಗುವ ವಿಶ್ವಾಸವಿದೆ. ನಮ್ಮ ಎಲ್ಲಾ ಅನರ್ಹ ಶಾಸಕರ ಅಜ್ಞಾತವಾಸ ಇಂದಿಗೆ ಅಂತ್ಯವಾಗಲಿದೆ ಎಂದು ಹೇಳಿದ್ದಾರೆ. ನನ್ನ ವಿರುದ್ಧ ಕಾಂಗ್ರೆಸ್ ಜೆಡಿಎಸ್