ರೈತರ ಜೀವನಾಡಿಯಾಗಿರೋ ಸಕ್ಕರೆ ಕಾರ್ಖಾನೆಯೊಂದು ಈ ಬಾರಿಯೂ ದಾಖಲೆ ಪ್ರಮಾಣದಲ್ಲಿ ಕಬ್ಬು ಅರೆಯುತ್ತಿದೆ. ಮಂಡ್ಯದ ಮಾಕವಳ್ಳಿಯಲ್ಲಿರುವ ರೈತರ ಜೀವನಾಡಿಯಾದ ಕೋರಮಂಡಲ್ ಸಕ್ಕರೆ ಕಾರ್ಖಾನೆಯು 7.5ಲಕ್ಷ ಟನ್ ಕಬ್ಬನ್ನು ಅರೆದಿದ್ದು, ಮಾರ್ಚ್ ಅಂತ್ಯದ ವೇಳೆಗೆ 9 ಲಕ್ಷ ಟನ್ ಕಬ್ಬನ್ನು ಅರೆಯುವ ಗುರಿ ಹೊಂದಿದೆ.ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಪರಿಸರ ಸ್ನೇಹಿಯಾಗಿರುವ ಸಕ್ಕರೆ ಕಾರ್ಖಾನೆಯು ದಾಖಲೆ ಪ್ರಮಾಣದಲ್ಲಿ ಕಬ್ಬು ನುರಿಸುತ್ತಿದೆ.ಕಾರ್ಖಾನೆಯು ದಿನವಹಿ 4 ಸಾವಿರ ಟನ್ ಕಬ್ಬನ್ನು ಅರೆಯುವ ಸಾಮರ್ಥ್ಯ ಹೊಂದಿದೆ. ನಿತ್ಯ