ಕುಂದಾನಗರಿ ಬೆಳಗಾವಿಯ ರೈತರ ಗೋಳು ಹೇಳತ್ತಿರದ್ದಾಗಿದೆ. ಕಷ್ಟ ಪಟ್ಟು ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗಲ್ಲ ಅನ್ನೊ ನೋವು ಒಂದು ಕಡೆಯಾದರೆ, ಸಾಲಮಾಡಿ ಕಬ್ಬು ಬೆಳೆದು ಕಾರ್ಖಾನೆಗೆ ಕಳುಹಿಸಿ ಐದು ವರ್ಷ ಕಳೆದರೂ ಇನ್ನು ರೈತರ ಕೈಗೆ ಕಾರ್ಖಾನೆಗಳಿಂದ ಕಬ್ಬಿನ ಬಾಕಿ ಬಿಲ್ಲ ಕೈ ಸೇರಿಲ್ಲ ಅನ್ನೊ ನೋವು ಇನ್ನೊಂದು ಕಡೆ. ಸಾಲಕ್ಕೆ ಹೆದರಿ ರಾಜ್ಯ ಸರ್ಕಾರಕ್ಕೆ ಮತ್ತು ಜಿಲ್ಲಾಡಳಿತಕ್ಕೆ ರೈತರು ದಯಾಮರಣಕ್ಕೆ ಅರ್ಜಿ ಬರೆದಿದ್ದಾರೆ.